Post and Photography by Shreeram Jamadagni
ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಅರಸೀಕೆರೆ-ತಿಪಟೂರು ಗಡಿ ಭಾಗದಲ್ಲಿರುವ ಗ್ರಾಮ ಹುಲ್ಲೇಕೆರೆ. ಅರಸೀಕೆರೆಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಈ ಗ್ರಾಮಕ್ಕೆ ಗಂಡಸಿ ಮಾರ್ಗವಾಗಿ ಅಥವಾ ರಾ.ಹೆ.206 ರ ಮಾರ್ಗವಾಗಿ ತಲುಪಬಹುದು. ಹೊಯ್ಸಳ ನಿರ್ಮಿತ ಶ್ರೀ ಕೇಶವ ದೇವಾಲಯವು ಅಂತ್ಯಂತ ಸುಂದರವಾಗಿದ್ದು, ಆಕರ್ಶಕ ಕೆತ್ತನೆಗಳಿಂದ ಕೂಡಿದೆ. ದೇವಸ್ಥಾನದ ಶಿಖಿರದಲ್ಲಿ ಹೊಯ್ಸಳ ಲಾಂಛನವನ್ನು ಕೆತ್ತಲಾಗಿದೆ. ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ದೇವಾಲಯದ ಒಳಭಾಗದಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಗಿಡಗೆಂಟೆಗಳ ಆಶ್ರಯತಾಣವಾಗಿದೆ. ದೇವಸ್ಥಾನದ ಒಳಭಾಗವು ಬಾವಲಿಗಳ ಹಿಕ್ಕೆಗಳಿಂದ ತುಂಬಿದೆ.. ಸೂಕ್ತ ನಿರ್ವಹಣೆ ಮಾಡಿದರೆ ಇದೊಂದು ಪ್ರವಾಸಿ ತಾಣವಾಗುವುದರಲ್ಲಿ ಸಂಶಯವಿಲ್ಲ.
No comments:
Post a Comment